Thursday, March 8, 2012

ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳು



ಅಪೂರ್ವ ಅರುಣೋದಯ

      ಶ್ರೀಕ್ಷೇತ್ರ ಆದಿಚುಂಚನಗಿರಿಯ ಧಾಮರ್ಿಕ ಕೈಂಕರ್ಯಕ್ಕೆ  ತಮ್ಮನ್ನೇ  ತಾವು ಸಮಪರ್ಿಸಿಕೊಂಡು 33 ಹಳ್ಳಿಗಳ ಧಾಮರ್ಿಕ ಆಡಳಿತವನ್ನು  ನೋಡಿಕೊಳ್ಳುತ್ತಿದ್ದ  ಸುಭೇದಾರ್ ಮನೆತನದ  ಶ್ರೀ ಚಿಕ್ಕಲಿಂಗಪ್ಪನವರ ಧರ್ಮಪತ್ನಿ  ಶ್ರೀಮತಿ ಬೋರಮ್ಮರವರು ಪರೋಪಕಾರ ಔದಾರ್ಯ ದೈವ ಭಕ್ತಿ ಸಹನೆ ನಿಸ್ವಾರ್ಥಗಳಿಗೆ ಹೆಸರಾದ ಅಂಚೆ ತಿಮ್ಮಯ್ಯನವರ ಮಗಳು ಪಟವಿಕ್ಕಿದ ಚಿನ್ನದಂತಿದ್ದಿತು, ಚಿಕ್ಕಲಿಂಗಪ್ಪ ಬೋರಮ್ಮನವರ ದಾಂಪತ್ಯ ಪರಸ್ಪರ ಗೌರವ, ದೈವ ಭಕ್ತಿ  ಧಾಮರ್ಿಕ ಶ್ರದ್ಧೆಗಳಲ್ಲಿ  ಸಮಾನ ಅಬಿರುಚಿ ಕರುಣೆ ಕ್ಷಮೆ ಈ ಎಲ್ಲಾ  ಗುಣಗಳಿಂದ ಅವರು ಆದರ್ಶ ದಂಪತಿಗಳಾಗಿದ್ದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಿಡದಿಯಿಂದ 3 ಕಿ.ಮೀ ದೂರದಲ್ಲಿ  ಹಸಿರು ಹಾಸಿನ ಹೊಲಗದ್ದೆಗಳ  ಮಧ್ಯದಲ್ಲಿರುವ ಬಾನಂದೂರು ಪ್ರಶಾಂತವಾದ ಗ್ರಾಮ. ಎತ್ತೆತ್ತ  ಕತ್ತು  ತಿರುಗಿಸಿದರೆ ಅತ್ತತ್ತ  ದೇವ ದೇವೆಗಳ ಸನ್ನಿಧಿ ಊರಿನಲ್ಲಿ  ಭಕ್ತಿಯ ವಾತಾವರಣವನ್ನುಂಟು ಮಾಡಿದೆ. ಬೆಳಗಿನ ಜಾವದಲ್ಲೇ ಮೂಡಿದ ಒಳ್ಳೆಯ ಕನಸಿನಿಂದ ಉಲ್ಲಸಿತರಾಗಿ ತಾಯಿ ಬೋರಮ್ಮರವರು ಎದ್ದರು. ಸ್ವಲ್ಪದಿನಗಳ ಹಿಂದಷ್ಟೆ  ತಾವು ಪತಿ ಚಿಕ್ಕಲಿಂಗಪ್ಪನವರೊಡನೆ ಮನೆದೇವರಾದ ಗಂಗಾಧರೇಶ್ವರನ ದರ್ಶನಕ್ಕೆ  ಆದಿಚುಂಚನಗಿರಿಗೆ ಹೋದಾಗ ತಮಗೆ ಪುತ್ರ ಸಂತಾನ ಪ್ರಾಪ್ತಿಗಾಗಿ ಅನನ್ಯ ಭಕ್ತಿಯಿಂದ ಬೇಡಿದ್ದು  ಅದಕ್ಕಾಗಿ ಕರುಣಾಕರ ಶಿವನು ಕನಸಿನಲ್ಲಿ  ಬಂದು ಪ್ರಸನ್ನಗೈದು ಆಕೆ ವಿಸ್ಮಿತರಾದರು ಪತಿಗೆ ಈ ಶುಭ ಸ್ವಪ್ನವನ್ನು  ತಿಳಿಸಲು ಕಾತುರರಾದರು. ವಿಚಾರವನ್ನು  ಕೇಳಿ ಪತಿಗೆ ಹಿಡಿಸಲಾರದಷ್ಟು  ಹಿಗ್ಗುಂಟಾಯಿತು.
ಕಾರಣಿಕ ಶಿಶುಗರ್ಭದಲ್ಲಿರುವಾಗಲೇ ತಾಯಿಗೆ ಅಪೂರ್ವವಾದ ಬಯಕೆಗಳು ದೇವಾಲಯಗಳಿಗೆ ಹೋಗಬೇಕು. ಸಾಧು ಸಂತರಿಗೆ ನಮಿಸಬೇಕು. ದೀನರಿಗೆ ಅನ್ನದಾನ ಮಾಡಬೇಕು ಇತ್ಯಾದಿ ಉದಾರವಾದ ನಿಸ್ವಾರ್ಥದ ಆಸೆಗಳು ನಡೆನುಡಿಯಲ್ಲಿ  ಕೋಮಲತೆಂುೆು ತುಂಬಿದ ಆ ತಾಯಿಗೆ ನವ ಮಾಸಗಳು ತುಂಬಿದವು.
ಬಾನಂದೂರೆಂಬ ರಮ್ಯ ಗ್ರಾಮದಲ್ಲಿ  ಪುಣ್ಯ ದಂಪತಿಗಳಾದ ಚಿಕ್ಕಲಿಂಗಪ್ಪ ಬೋರಮ್ಮನವರ 3ನೇಯ ಸಂತಾನವಾಗಿ ಗಂಗಾಧರೇಶ್ವರ ಕೃಪೆಯಿಂದ ಗಂಡು ಶಿಶುವೊಂದು ದಿನಾಂಕ : 18-01-1945ನೇ ಗುರುವಾರ ಬೆಳಗಿನ ಜಾವ 4.45ಗಂಟೆಗೆ ಶುಭ ಧನುರ್ಲಗ್ನದಲ್ಲಿ  ಭುವನದ ಭಾಗ್ಯವೋ ಎಂಬಂತೆ ಜನಿಸಿತು. ಮನೆಯವರಿಗಷ್ಟೇ ಅಲ್ಲದೇ  ಊರಿನವರಿಗೆಲ್ಲಾ  ಸಂಭ್ರಮವೆನಿಸಿತು.
ಹಳ್ಳಿಯ ಸಮಸ್ತರೂ ಮಗುವಿನ ಅಪೂರ್ವ ಲಾವಣ್ಯಕ್ಕೆ  ಕರಗಿದರು. ಊರಿನ ಕಣ್ಮಣಿಯಾಗಿಬಿಟ್ಟಿತು ಮಗು. ಕೆಲವೇ ದಿನಗಳಲ್ಲಿ  ಅನಿರೀಕ್ಷಿತವಾಗಿ ಬಂದ ಂುೋಗಿಂುೊಬ್ಬರು ಈ ಕಂದನನ್ನು  ಕಂಡು ಭೂಮಿಳಿದ ಶಿವಕಳೆ ಕಾರಣಿಕ ಪುರುಷನಿವನು ಇವನಿಂದ ಲೋಕಕಲ್ಯಾಣವಾಗುವುದು ಎಂದು ಭವಿಷ್ಯ  ನುಡಿದು ನಡೆದೇ ಬಿಟ್ಟರು. ಮನೆಯವರು ಈ ಮಾತು ಕೇಳಿ ದಿಗ್ಮೂಡರಾದರು.
ಮೌಢ್ಯ ಅಜ್ಞಾನ, ದಾರಿದ್ರ ್ಯಗಳ ನಿವಾರಣೆಗೆಂದೆ ಪರಶಿವನ ಪ್ರತಿನಿಯಾಗಿ ತೇಜೋರೂಪಿಯಾಗಿ ಅವತರಿಸಿದ ಆ ಶಿಶುವನ್ನು  ಹಡೆದ ತಾಯಿ ಮಹಾ ಭಾಗ್ಯಶಾಲಿನಿಂುೆು ಸರಿ. ಗಂಗಾಧರಯ್ಯನೆಂಬ ನಾಮಾಂಕಿತದೊಡನೆ, ತಾಯ್ತಂದೆಗಳಿಗೆ ವಿಧೇಯರಾಗಿ ಒಡಹುಟ್ಟಿದವರೊಡನೆ ಅನ್ಯೋನ್ಯವಾಗಿ ಬೆರೆತು ಸಾತ್ವಿಕವಾಗಿದ್ದರು. ಪುಟ್ಟಲಿಂಗಮ್ಮ , ಶಿವಮ್ಮ  ಎಂಬಿಬ್ಬರು  ತಂಗಿಯರು, ಮರಿಸ್ವಾಮಯ್ಯ ಎಂಬ ತಮ್ಮ  ಜೊತೆಗೂಡಿದರು. ಅಧ್ಯಯನ, ಆಧ್ಯಾತ್ಮ ವೈದ್ಯಕೀಯ ವಿಷಯಗಳಲ್ಲಿ  ಆಸಕ್ತಿ  ಪೂವರ್ಾಪರ ಯಾವುದನ್ನು  ವಿಶ್ಲೇಷಿಸದೆ ಕೂಡಲೇ ಯಾವುದನ್ನು  ನಂಬದ ವೈಚಾರಿಕ ಮನೋಭಾವ ಇವೆಲ್ಲಾ  ಅವರಿಗೆ ಸ್ವಭಾವತಃ ಇದ್ದ  ಗುಣಗಳೇ, ತಾತ ತಿಮ್ಮೇಗೌಡರು ಬಾಲಕ ಗಂಗಾಧರಯ್ಯನವರಿಗೆ ಉತ್ತಮ ಗುಣಗಳು ಪ್ರರ್ವಸಲು ಹೆಚ್ಚು  ಪ್ರೋತ್ಸಾಹಿಸಿದರು. ಬೆಳೆಯುವ ಪೈರು ಮೊಳಕೆಯಲ್ಲಿಂುೆು ಎಂಬಂತೆ ಮೊಮ್ಮಗನ ಜ್ಞಾನ ದಾಹ- ಆಧ್ಯಾತ್ಮದ ಆಸಕ್ತಿಯನ್ನು  ಮನಗಂಡ, ತಾತ ಮೊಮ್ಮಗನನ್ನು  ಪ್ರೀತಿ ಗೌರವದಿಂದ ಗುರುಗಳೇ ಎಂದೇ ಕರೆಯುತ್ತಿದ್ದರಂತೆ.
ಬಾನಂದೂರಿನಲ್ಲಿ  ಪ್ರಾಥಮಿಕ ಶಿಕ್ಷಣ, ಬಿಡದಿಯಲ್ಲಿ  ಮಾಧ್ಯಮಿಕ ಶಾಲಾ ಶಿಕ್ಷಣ ವ್ಯಾಸಂಗ ಮಾಡಿದರು. ರಾಮನಗರದ ವಿವಿದೋದ್ಧೇಶ ಪ್ರೌಢಶಾಲೆಯಲ್ಲಿ  ಪ್ರೌಢ ಶಿಕ್ಷಣ ಪೂರೈಸಿದರು. ರಜೆಯಲ್ಲಿ  ಊರಿಗೆ ಬಂದಾಗ ಬಾನಂದೂರಿನ ಮಗೆಕೆರೆ ಬಳಿ ಇರುವ ಹಿಪ್ಪೆ ಮರದ ಕೆಳಗೊಂದು ಕಲ್ಲಿನ ಜಗುಲಿ ಮೇಲೆ ಕುಳಿತು ಗಾಢವಾಗಿ ಚಿಂತಿಸುತ್ತಿದ್ದರಂತೆ.
ಬದುಕಿನ ಸಾರ್ಥಕತೆಯ ಬಗ್ಗೆ  ನಡೆಯುತ್ತಿದ್ದ  ಅವರ ಮನೋ ಮಥನ ಚಿಂತನ ಮುಂದೆ ಅವರು ಸ್ವೀಕರಿಸಿದ ಸನ್ಯಾಸ ವ್ರತಕ್ಕೆ  ಹಿಪ್ಪೆ  ಮರ, ಬೋದಿ ವೃಕ್ಷದಷ್ಟೆ  ಪವಿತ್ರವಾದುದು ಗಂಗಾಧರಯ್ಯನವರಿಗೆ ಮಿತಾಹಾರಿಯಾದ ಇವರು ರಾಗಿ ಮುದ್ದೆ  ಸೊಪ್ಪಿನ ಸಾರು ಪ್ರಿಯರು ಕೆಲಸದಲ್ಲಿ  ಅತಿ ಚುರುಕು ಲೌಕಿಕದ ವಿಷಯಗಳಲ್ಲಿ  ಅವರು ಅಂಟಿಯೂ ಅಂಟದಂತಿದ್ದರು. ಅಮೂರ್ತ ವಿಷಯಗಳ ಬಗ್ಗೆ  ಚಚರ್ಿಸಿ ತಿಳಿದುಕೊಳ್ಳಲಿಚ್ಛಿಸುತ್ತಿದ್ದ  ಗಂಗಾಧರಯ್ಯ ಅಧ್ಯಾಪಕರುಗಳಿಗೆ ವಿಶಿಷ್ಠ ವಿದ್ಯಾಥರ್ಿಯಾಗಿ ಕಾಣಿಸುತ್ತಿದ್ದರು. ಮನಸ್ಸಿಗೆ ಮೀರಿದ ಆಧ್ಯಾತ್ಮಿಕ ಪ್ರೀತಿ ಅವರಿಗೆ ಸಹಜ ವೈರಾಗ್ಯವನ್ನುಂಟು ಮಾಡಿದ್ದಿತು.
ಬೆಂಗಳೂರಿನ ಸಕರ್ಾರಿ ಕಲಾ ಮತ್ತು  ವಿಜ್ಞಾನ ಕಾಲೇಜಿನಲ್ಲಿ  ವಿಜ್ಞಾನ ವಿಷಯದಲ್ಲಿ  ಪದವಿ ಪೂರ್ವ ತರಗತಿಗೆ ಸೇರಿದ ಗಂಗಾಧರಯ್ಯ ಸಾಧುಸಂತರಿಗೆ ಆಶ್ರಯತಾಣವಾಗಿದ್ದ ಸಂಪಂಗಿರಾಮನಗರದ ಹತ್ತಿರವಿರುವ ಚಿದ್ಗಗನಾನಂದಾಶ್ರಮದಲ್ಲಿ  ವಾಸವಿದ್ದರು. ಅಲ್ಲಿ  ಂುೋಗಿಗಳೊಬ್ಬರು  ಗಂಗಾಧರಯ್ಯನನ್ನು   ನೋಡಿ ಈತ ಸಾಮಾನ್ಯ ಮಾನವನಲ್ಲ  ಯುಗದ ಮಹಾಪುರುಷ ಶರಣರ ಸುಳಿವನ್ನು  ಶರಣರೇ ಬಲ್ಲರು ಎಂದಿದ್ದರಂತೆ.
ಪ್ರಾಣಿ ಹಿಂಸೆ ಸಹಿಸದ ಗಂಗಾಧರಯ್ಯ ತುಂಬಾ ದಯಾಳುವಾಗಿದ್ದರು. ಎತ್ತುಗಳನ್ನು  ಅಮಾನುಷವಾಗಿ ದುಡಿಸಿಕೊಂಡರೆ ಹಾಲು ಕರೆಯದ ಹಸುಗಳನ್ನು  ಹೊಡೆದರೆ ಅವರ ಕಣ್ಣಲ್ಲಿ  ನೀರು ತುಂಬಿರುತ್ತಿತ್ತು . ನಾಗರ ಹಾವೊಂದು ಒಮ್ಮೆ  ಅವರ ಕೊಠಡಿಗೆ ನುಗ್ಗಿದಾಗ, ಮತ್ತೊಮ್ಮೆ  ಗದ್ದೆಯಲ್ಲಿ  ಹೆಡೆ ಎತ್ತಿದಾಗ ಅವರು ಕೊಲ್ಲಲಿಲ್ಲ. ಇಂತಹ ಮೃದು ಮನಸ್ಸಿನ ಯುವಕ ಏಕಾಂತ ಪ್ರಿಯರಾಗಿ ನಿಸರ್ಗ ಪ್ರೇಮಿಗಳಾಗಿದ್ದರು. ಒಮ್ಮೆ  ಲಾಲ್ಬಾಗಿಗೆ ಹೋಗಿದ್ದಾಗ ಬಿರುಗಾಳಿಗೆ ಮರ ಹೊಂದರ ಬಲವಾದ ಕೊಂಬೆ ಮುರಿದು  ಆ ಮರದ  ಕೆಳಗೆ ಕುಳಿತ್ತಿದ್ದಂತಹ ಇವರ ಮೇಲೆ ಬೀಳದೆ ಅದ್ಭುತವೆನ್ನುವಂತೆ  ಕೂದಲೆಳೆಯಲ್ಲಿ  ತಪ್ಪಿ  ಹೋಯಿತಂತೆ. ಲೌಕಿಕ ಜೀವನದ ಬಗ್ಗೆ  ನಿರಾಸಕ್ತರಾದ ಗಂಗಾಧರಯ್ಯನವರಿಗೆ ಈ ಘಟನೆಯಿಂದ ತಾವು ಯಾವುದೋ ಒಂದು ಮಹತ್ಕಾರ್ಯದ ಸಲುವಾಗಿ ಬದುಕಬೇಕಾಗಿದೆ. ಅದು ದೈವೇಚ್ಛೆ  ಎಂಬ ಭಾವನೆ ಬಲವಾಯಿತು.
ಇವರು ಪದವಿಗೆ ಸೇರುವ ಮುನ್ನ  ತಾವು ಓದಿದ ಪ್ರೌಢಶಾಲೆಯಲ್ಲಿ  ಕೆಲತಿಂಗಳಕಾಲ ಗುಮಾಸ್ತರಾಗಿ ಕೆಲಸಕ್ಕೆ  ಸೇರಿಕೊಂಡ ಗಂಗಾಧರಯ್ಯ ಸಮಯವನ್ನು  ವ್ಯರ್ಥಮಾಡದೆ ಆಡಳಿತದನುಭವವನ್ನು  ಗಳಿಸಿಕೊಂಡರೆನ್ನಬಹುದು. ಆ ಸಮಯದಲ್ಲಿ   ಶ್ರೀಯುತರು ಆದಿಚುಂಚನಗಿರಿ ಮಠಾಶರನ್ನು   ಕಾಣ ಬಯಸಿ ಬರೆದ ಪತ್ರ ಅವರ ವಿನಯ ಸಂಸ್ಕೃತಿ ವಿದ್ಯೆಯ ಬಗೆಗಿನ ಆಸಕ್ತಿ ಹಾಗೂ ಆಧ್ಯಾತ್ಮಿಕ ಬಲವನ್ನು  ತೋರಿಸುವಂತಿದೆ. ಅವರ ಧೈರ್ಯ ಹಾಗೂ ಸಮಯ ಸ್ಫೂತರ್ಿ ಗುಣಗಳು ಅನೇಕ ಸಂದರ್ಭದಲ್ಲಿ  ವೇದ್ಯವಾಗುತ್ತವೆ.
ತಮ್ಮಲ್ಲಿದ್ದಂತಹ ಸದ್ಗುಣಗಳಿಂದ ಊರಿನವರ ಪ್ರೀತಿಗಳಿಸಿಕೊಂಡಿದ್ದಂತಹ ಗಂಗಾಧರಯ್ಯನವರಿಗೆ ಲೋಕ ಪ್ರೀತಿಯ ಗಳಿಕೆಗೂ ಕಾಲ ಒದಗಿ ಬಂತು ಸನ್ಯಾಸಿಯಾಗುವ ಅವರ ಆಸೆ ಫಲಿಸುವ ವೇಳೆ ಸನ್ನಿಹಿತವಾಗಿತ್ತು  . ಕನಸಿನಲ್ಲಿ  ಸದಾ ಬಾ ಬಾ ಕಂದ ಎಂದು ಕೈ ಬೀಸಿ ಕರೆಯುತ್ತಿದ್ದ  ಕಾಲಭೈರವೇಶ್ವರನು ಅವರನ್ನು  ಆದಿಚುಂಚನಗಿರಿ ಕ್ಷೇತ್ರದ ಸೇವೆ ಮಾಡಲು ನಿಜವಾಗಿಯು ಕರೆಸಿಕೊಂಡ.
ಶ್ರೀ ರಾಮಾನಂದನಾಥ ಸ್ವಾಮಿಗಳು ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಾಗ, ಆದಿಚುಂಚನಗಿರಿ ಪೀಠಕ್ಕೆ  ಂುೋಗ್ಯರಾದ ಉತ್ತರಾಕಾರಿಗಳ ಆಂುೆ್ಕು  ಅನಿವಾರ್ಯವಾಯಿತು. ಂುೋಗ್ಯ ಅಭ್ಯಥರ್ಿಗಳು ಬೇಕೆಂಬ ಪ್ರಕಟಣೆ ಪತ್ರಿಕೆಯಲ್ಲಿ  ಬಂತು. ಬಾಯಾರಿದವನಿಗೆ ತಿಳಿ ನೀರು ದೊರೆತಂತಾಗಿ ಭಗವಂತನ ಸೇವೆ ಮಾಡಲೋಸುಗ ಸನ್ಯಾಸ ಸ್ವೀಕರಿಸಲು ಹರ್ಷಚಿತ್ತರಾಗಿ ಆರಾಧ್ಯದೈವ ಸಾನ್ನಿಧ್ಯವಾದ ಚುಂಚನಗಿರಿಗೆ ತೆರಳಿದರು. ಭಕ್ತರ ಇಚ್ಛೆಯಂತೆ ಇಬ್ಬರು ಶಿಷ್ಯರನ್ನು  ಶ್ರೀ ರಾಮಾನಂದನಾಥ ಸ್ವಾಮಿಗಳು ಆಂುೆ್ಕು  ಮಾಡಿದರು. ಅವರಲ್ಲಿ  ಗಂಗಾಧರಯ್ಯ  ಒಬ್ಬರು. ತಾಯ್ತಂದೆಯರ ಅನುಮತಿಂುೊಂದಿಗೆ ಗಂಗಾಧರಯ್ಯ ಶ್ರೀಕ್ಷೇತ್ರಕ್ಕೆ ತೆರಳಲು ಸಿದ್ಧರಾದರು. ಊರೆಲ್ಲಾ  ಸಿಂಗಾರಗೊಂಡು ಆದರಾಬಿಮಾನದಿಂದ  ಬೀಳ್ಕೊಟ್ಟರು. ಆ ಸಂದರ್ಭದಲ್ಲಿ  ಮಾತನಾಡಿದ ಗಂಗಾಧರಯ್ಯ ವಿ ಆಡಿಸಿದಂತೆ ಆಡುವ ಗೊಂಬೆ ನಾನು , ಬುದ್ಧನ ಜೀವನ ಹೇಗೆ ತಮಗೆ ಮಾದರಿಯಾಯಿತೆಂಬುದನ್ನು  ಅದರೊಡನೆಂುೆು ಸನ್ಯಾಸಿಯಾಗಬೇಕೆಂಬ ತಮ್ಮ  ಗುರಿಯ ಸಮರ್ಥನೆಯನ್ನು  ನಿವೇದಿಸಿದ್ದರು ಮುಂದೆ ಅವರು ದಣಿವರಿಯದ ಕರ್ಮಂುೋಗಿಯಾಗಿ ರೂಪುಗೊಳ್ಳಲು  ಇದೇ ಮಹಾಮಂತ್ರವಾಯಿತು.
ತಮ್ಮ  ಮಗನನ್ನು  ಮಹಾಮಣಿಹಕ್ಕೆ  ಒಪ್ಪಿಸಿದ ತಾಯಿ ಬೋರಮ್ಮನವರ ಹರಕೆ ಗಂಗಾಧರಯ್ಯನವರಿಗೆ ಶ್ರೀರಕ್ಷೆಯಾಯಿತು. ಮಗು, ಈತನಕ ನಮಗೆ ಕಣ್ಮಣಿಯಾಗಿದ್ದ  ನೀನು, ಮುಂದೆ ಅಸತ್ಯ ಅಜ್ಞಾನಗಳನ್ನು  ನಿವಾರಿಸಿ ಸತ್ಯಧರ್ಮಗಳನ್ನುದ್ಧರಿಸುವ ಜಗಜ್ಯೋತಿಯಾಗು. ನೊಂದವರ ನೋವು ನಿವಾರಿಸುವ ಬವಣೆಗಳಲ್ಲಿ  ಬೆಂದವರಿಗೆ ಬದುಕು ಕೊಡು, ತಾಯಿಯಿಂದ  ಹೃದಯ ತುಂಬಿ ಬಂದ ಮಾತುಗಳಿವೆ. ನಂತರ ಗಂಗಾಧರಯ್ಯನವರು ತಮ್ಮ   ಕನಸ್ಸು ಮನಸ್ಸುಗಳ ತುಂಬ ತುಂಬಿ ಕೊಂಡಿದ್ದ  ಪುಣ್ಯಭೂಮಿ ಕರ್ಮಭೂಮಿ ಚುಂಚನಗಿರಿಗೆ ಬಂದು, ಆಧ್ಯಾತ್ಮ  ಗಗನದಲ್ಲಿ  ದೂರ ದೂರಕ್ಕೆ  ತ್ಯಾಗವಿಮಾನದಲ್ಲಿ  ಹಾರಲು ಅಣಿಯಾದರು. ಶ್ರೀಗಳು ಹುಟ್ಟಿ  ಬೆಳೆದ  ಬಾನಂದೂರಿನ ಮನೆ ಇಂದು ಧ್ಯಾನ ಮಂದಿರವಾಗಿ ರೂಪುಗೊಂಡು ಊರಿನಲ್ಲಿ  ತ್ಯಾಗ ಭಕ್ತಿಗಳ ಕಂಪನ್ನು  ನಿತ್ಯ ಪಸರಿಸುತ್ತಿದೆ.
ಅಂದಿನ ಪೀಠಾಪತಿಗಳಾದ ಗುರು ಶ್ರೀ ರಾಮಾನಂದನಾಥರು 12-02-1968ರಂದು ವಿದ್ಯುಕ್ತವಾಗಿ ಮಂತ್ರೋಪದೇಶ ಮಾಡಿ ಸನ್ಯಾಸ ದೀಕ್ಷೆ ನೀಡಿ ಬಾಲಗಂಗಾಧರನಾಥ ಸ್ವಾಮಿಗಳೆಂದು ನೂತನ ಅಬಿದಾನ ಮಾಡಿದರು. ನಂತರ ಅದ್ವೆ ತ ವೇದಾಂತ ಸಂಸ್ಕೃತ ಪದವಿ ಪಡೆಯಲೆಂದು ಬೆಂಗಳೂರಿಗೆ ಹೋಗಿ ಕೈಲಾಸಾಶ್ರಮದಲ್ಲಿದ್ದು  ಶ್ರೀ ತಿರುಚ್ಚಿ  ಸ್ವಾಮಿಗಳ ಸಾನ್ನಿಧ್ಯದಲ್ಲಿ  ಅವರ ತತ್ವ ವಿಚಾರಗಳು ಇನ್ನಷ್ಟು  ಸ್ಪುಟಗೊಳ್ಳಲು  ಅನುಕೂಲವಾಯಿತು. ನಂತರ ಗುರುಗಳ ಶುಶ್ರೂಷೆಗೆ ವಾಪಸ್ಸಾದ ಶ್ರೀಗಳು ರಾಮಾನಂದನಾಥ ಸ್ವಾಮಿಗಳ ಶಿವಸಾಯುಜ್ಯದ ನಂತರ ಭಕ್ತ ಕೋಟಿಯ ಇಚ್ಛೆಯಂತೆ 25-09-1974ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಪತಿಗಳಾಗಿ ಸಾಂಪ್ರದಾಯಿಕ ವಿ ವಿಧಾನಗಳ ಮೂಲಕ ಸಿದ್ಧ ಸಿಂಹಾಸನ ವೇರಿದರು. ಶ್ರೀಗಳು ಪಟ್ಟಕ್ಕೆ  ಬಂದ ದಿನ ಹಿತವಾದ ಮಳೆ  ಆಹ್ಲಾದಕರ ವಾತಾವರಣ ತಂಪಾಗಿ  ಗಂಗಾಧರೇಶ್ವರ ಸ್ವಾಮಿ ದೇವಾಲಯದ  ಗಂಟೆ ಅನಿರೀಕ್ಷಿತವಾಗಿ ತಂತಾನೆ ನಿನಾಸಿತೆಂದು ಆಗಿನ ಜನರೇ ಹೇಳುತ್ತಾರೆ ಒಳ್ಳೆಯ ಕೆಲಸದಲ್ಲಿ  ಪ್ರಕೃತಿಯು ಪರವಾನಗಿ ನೀಡುತ್ತದೆಂಬುದೇ ಇದರ ಹಿಂದಿರುವ ಸತ್ಯ. 2000 ವರ್ಷಗಳ ಇತಿಹಾಸವನ್ನೊಂದಿರುವ ಶ್ರೀಕ್ಷೇತ್ರದ 71ನೇಯ ಪೀಠಾಪತಿಗಳಾದ ಶ್ರೀಗಳವರ ಪವಾಡ ಸದೃಶ ಸಾಧನೆಗಳು ಚುಂಚನಗಿರಿಯ ಇತಿಹಾಸದಲ್ಲಿ  ಸುವಣರ್ಾಕ್ಷರಗಳಲ್ಲಿ  ಬರೆದಿಡಬೇಕಾದಂತಹುದು . 

ಲೇಖನ :- ಪ್ರೊ  ಸಿ.ನಂಜುಂಡಯ್ಯ
ಪ್ರಾಚಾರ್ಯರು
ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯ
ಶ್ರೀ ಆದಿಚುಂಚನಗಿರಿ ಕ್ಷೇತ್ರ




Wednesday, March 7, 2012

ಶ್ರೀ ಆದಿಚುಂಚನಗಿರಿ ಕ್ಷೇತ್ರ


ಶ್ರೀ ಆದಿಚುಂಚನಗಿರಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿದೆ. ಪ್ರಾಚೀನವೂ, ಪ್ರಸಿದ್ಧವೂ, ಪವಿತ್ರವೂ ಆದ ಒಂದು ಕ್ಷೇತ್ರ. ಸಮುದ್ರಮಟ್ಟದಿಂದ ಬೆಟ್ಟವು ಸುಮಾರು ೩೩೨೧ ಅಡಿ ಎತ್ತರವಿದೆ. ಅಪಾರ ನಿಸರ್ಗ ಸೌಂದರ್ಯ ಸಂಪತ್ತಿನಿಂದ ಕಂಗೊಳಿಸುವ, ಪ್ರಕೃತಿ ವೈಚಿತ್ರ‍್ಯಗಳಿಂದ ಬೆರಗುಗೊಳಿಸುವ ದಿವ್ಯನೆಲೆ.


ಶಿವಪಾರ್ವತಿಯರ ಮದುವೆಗೆ ಹಿಮರಾಜ ವಿಂಧ್ಯರಾಜನನ್ನು ಆಮಂತ್ರಿಸಲಿಲ್ಲ. ವಿಚಾರನ್ನು ನಾರದನಿಂದ ತಿಳಿದ ವಿಂಧ್ಯರಾಜ ಬಹಳ ಕೋಪಗೊಂಡು ಒಂದೇ ಸಮನೆ ಬೆಳೆಯಲಾರಂಭಿಸಿದನು. ವಿಂಧ್ಯರಾಜನು ಬೆಳೆಯುವ ರೀತಿಯನ್ನು ಕಂಡ ದೇವತೆಗಳು, ಋಷಿಗಳು ಹೆದರಿದರು. ಆಗ ದಕ್ಷಿಣಾಪಥದಲ್ಲಿದ್ದ ಆಗಸ್ತ್ಯ ಋಷಿಯು ತನ್ನಪತ್ನಿ ಲೋಪಮುದ್ರೆಯೊಂದಿಗೆ ವಿಂಧ್ಯರಾಜನಲ್ಲಿಗೆ ಬಂದನು. ಋಷಿಯನ್ನು ಕಂಡ ವಿಂಧ್ಯರಾಜ ಬಗ್ಗೆ ನಮಸ್ಕಾರ ಮಾಡಿದ. ಆಗ ಋಷಿಯು ತಾನು ಮತ್ತೆ ಬರುವವರೆಗೆ ಹಾಗೆಯೇ ಇರಬೇಕೆಂದು ಆಜ್ಞಾಪಿಸಿ ಹೊರಟುಹೋದನು. ಇತ್ತ ವಿಂಧ್ಯರಾಜನು ಋಷಿಯ ಆಜ್ಞೆಯನ್ನು ಮೀರಲಾರದೆ ಹಾಗೆಯೇ ನಿಂತನು. ಅಗಸ್ತ್ಯನು ಘೋರಾರಣ್ಯದಲ್ಲಿ ತಪಸ್ಸಿಗೆ ನಿಂತನು. ಲೋಕಕ್ಕೆ ವಿಂಧ್ಯರಾಜನಿಂದ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ ಋಷಿಯ ನಿಶಿತಮತಿಗೆ ಮತ್ತು ತಪಸ್ಸಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾದನು. ಆಗ ಅಲ್ಲಿಯೇ ಇದ್ದ ಅಗಸ್ತ್ಯ ಪತ್ನಿ ಲೋಪಮುದ್ರೆಯ ಮೇಲೆ ಶಿಶದೃಷ್ಟಿ ಬಿದ್ದುದನ್ನು ಕಂಡು ಪಾರ್ವತಿ ಅಸೂಯೆಗೊಂಡಳು. ಪಾರ್ವತಿಯ ಮನಸ್ಸನ್ನು ತಿಳಿದ ಶಿವ ದೀರ್ಘ ಕಾಲದ ತಪಸ್ಸಿಗೆ ಕುಳಿತನು. ಶಿವನ ತಪಸ್ಸಿನ ಫಲವಾಗಿ ಸಿದ್ಧಯೋಗಿಯೊಬ್ಬ ಜನಿಸಿದನು. ಪಂಚಪ್ರಾಣಲಿಂಗದಂತೆ ಕಾಣುವ ಸ್ಥಳದಲ್ಲಿ ನೀನು ಹೋಗಿ ನೆಲೆಸೆಂದು ಶಿವನು ಸಿದ್ಧಯೋಗಿಗೆ ಆಜ್ಞಾಪಿಸಿದನು. ಅದರಂತೆ ಸಿದ್ಧಯೋಗಿಯು ಆದಿಚುಂಚನಗಿರಿಯಲ್ಲಿ ನೆಲೆಸಿದನು. ಸಿದ್ಧಯೋಗಿ ಗಿರಿಯಲ್ಲಿ ನಿಂತು ಲೋಕಕಲ್ಯಾಣಕ್ಕಾಗಿ ದುಡಿದನೆಂದು ಸ್ಕಾಂದ ಪುರಾಣದಿಂದ ತಿಳಿದು ಬರುತ್ತದೆ. ಬಹುಶಃ ಕಾರಣದಿಂದಲೇ ಸಿದ್ಧರ ಮಠ ಎಂಬ ಹೆಸರು ಬಂದಿರಬಹುದು.


ಕನಕಾಸುರನೆಂಬ ರಾಕ್ಷಸನ ಸಂಹಾರ ಮಾಡುವುದಕ್ಕಾಗಿ ವಿಷ್ಣು ಮೋಹಿನಿ ರೂಪ ಧರಿಸಿದ ತನ್ನ ಕಾರ‍್ಯ ಮುಗಿದಮೇಲೆ ವಿಷ್ಣು ನೇರವಾಗಿ ಕೈಲಾಸಕ್ಕೆ ಹೋದನು. ಮೋಹಿನಿಯ ಅಪ್ರತಿಮ ಸೌಂದರ‍್ಯವನ್ನು ಕಂಡ ಶಿವ ಆಕೆಯೊಂದಿಗೆ ಕೂಡಿದ. ವಿಷ್ಣು ಅವತಾರವಾಗಿದ್ದ ಮೋಹಿನಿ ಶಿವಶಕ್ತಿಯನ್ನು ಒಂಬತ್ತು ತಿಂಗಳು ಗರ್ಭದಲ್ಲಿ ಬೆಳೆಸುವಂತರಲಿಲ್ಲ. ಹೀಗಾಗಿ ಅಕಾಲದಲ್ಲಿ ಅವತರಿಸಿದ ಶಿವ ಮತ್ತು ವಿಷ್ಣು ಶಕ್ತಿಗೆ ಅಕಾಲ ಭೈರವನೆಂದು ಹೆಸರಾಯಿತು. ಮುಂದೆ ಅಕಾಲಭೈರವ, ಕಾಲಭೈರವನಾಗಿ ವೀರಭದ್ರನ ಆಜ್ಞೆಯಂತೆ ಶಿವನ ಬಾಗಿಲು ರಕ್ಷಕನಾದ. ಆದುದರಿಂದ ಇವನಿಗೆ ಬಾಗಿಲು ಭೈರವನೆಂದು ಹೆಸರಾಯಿತು. ಶಿವನ ಅಪ್ಪಣೆಯಂತೆ ಕಾಲಭೈರವ ಆದಿಚುಂಚನಗಿರಿಯಲ್ಲಿ ಬಂದು ನೆಲೆಸಿದ. ವಿವರಗಳನ್ನು ಸಿದ್ಧಲಿಂಗ ಪುರಾಣಂದಲ್ಲಿ ಹೇಳಲಾಗಿದೆ.


ರಾಮಲಕ್ಷ್ಮಣ ಮತ್ತು ಸೀತೆಯರು ಪಂಚವಟಿಯಲ್ಲಿದ್ದಾಗ ರಾವಣ ಸೀತೆಯನ್ನು ಅಪಹರಿಸಿದ. ಆಗ ಸೀತಾನ್ವೇಷಣೆಯಲ್ಲಿ ದಕ್ಷಿಣದ ಕಡೆ ಹೊರಟಿದ್ದ ರಾಮ ಲಕ್ಷ್ಮಣರು ಕಾವೇರಿ ತೀರದ ಗಜಾರಣ್ಯ (ಈಗಿನ ಚುಂಚನಕಟ್ಟಿ) ಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದ ಶಿವನನ್ನು ಕಂಡು ಭಕ್ತಪೂರ್ವಕವಾಗಿ ನಮಿಸಿದರು. ಇದರಿಂದ ಪ್ರಸನ್ನನಾದ ಶಿವನು ಸೀತೆಯೊಂದಿಗೆ ಹಿಂದಿರುಗುವಾಗ ಇಲ್ಲಿಗೆ ಬರಬೇಕೆಂದು ಆಹ್ವಾನಿಸಿದನು. ಅವರಂತೆ ರಾಮಲಕ್ಷ್ಮಣ ಮತ್ತು ಸೀತೆ ಅಲ್ಲಿಗೆ ಬಂದರು. ಆಗ ಶಿವನು ಅವರಿಗೆ ಗಜಾರಣ್ಯಕ್ಷೇತ್ರವನ್ನು ಬಿಟ್ಟುಕೊಟ್ಟು ತಾನು ಅಂಥದೆ ಸುಂದರ ಜಾಗವೊಂದನ್ನು ಹುಡುಕುತ್ತಾ ಬರುವಾಗ ಈಗಿನ ಚುಂಚನಗಿರಿ ಕ್ಷೇತ್ರ ದೊರೆಯಿತು. ಅಲ್ಲಿನ ಕಾಡು, ಅದರ ಪ್ರಶಾಂತತೆ ಮತ್ತು ಪ್ರಕೃತಿ ಸೌಂದರ‍್ಯಕ್ಕೆ ಮಾರುಹೋದ ಶಿವನು ಸ್ಥಳಕ್ಕೆ ಚುಂಚನಗಿರಿ ಎಂದು ನಾಮಕರಣ ಮಾಡಿ ತಾನು ಬಾಗಿಲು ಭೈರವನಾಗಿ ನೆಲೆ ನಿಂತನೆಂದು ಪುರಾಣೋಕ್ತ ಸಂಗತಿ.


ಚುಂಚ ಎಂಬ ರಾಕ್ಷಸನು ಹಿಂದೆ ಸ್ಥಳದಲ್ಲಿ ವಾಸಮಾಡುತ್ತಿದ್ದನು. ಅವನಿಂದ ಜನರಿಗೆ ಬಹಳ ತೊಂದರೆಯಾಗುತ್ತಿತ್ತು. ರಾಕ್ಷಸನನ್ನು ಸಂಹಾರ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಕೊನೆಗೆ ಶಿವನು ಬಂದು ರಾಕ್ಷಸನನ್ನು ಕೊಂದು ಕೆಲವು ಕಾಲ ಇಲ್ಲಿ ತಪಸ್ಸು ಮಾಡಿದನು. ಶಿವನು ತಪಸ್ಸಿಗೆ ಕುಳಿತಿದ್ದ ಸ್ಥಳಕ್ಕೆಉರಿಗದ್ದಿಗೆ’ ಎಂದು ಕರೆದು ಇಂದಿಗೂ ಸ್ಥಳವನ್ನು ಪವಿತ್ರವೆಂದು ಜನರುಪೂಜಿಸುತ್ತಾರೆ. ಪ್ರದೇಶದಲ್ಲಿ ಚುಂಚನೆಂಬ ರಾಕ್ಷಸನು ವಾಸಮಾಡುತ್ತಿದ್ದ ಕಾರಣ ಚುಂಚನಗಿರಿ ಎಂಬ ಹೆಸರು ಬಂದಿರುವುದಾಗಿ ಒಂದು ಐತಿಹ್ಯ ಹೇಳುತ್ತದೆ.


ತ್ರಿಮೂರ್ತಿಗಳಲ್ಲಿ ತಾನು ಶ್ರೇಷ್ಠನೆಂದು ಬ್ರಹ್ಮ ಹೆಮ್ಮೆಗೊಂಡಾಗ ಶಿವನು ಭೈರವನನ್ನು ಸೃಷ್ಟಿಸಲು ಅವನು ಬ್ರಹ್ಮನು ಐದನೆಯ ತಲೆಯನ್ನು ಕತ್ತರಿಸಲು, ಅದು ಅವನ ಕೈಗಂಟಿಕೊಂಡಿತು. ಭೈರವನು ಕಾಪಾಲಿಕನಾಗಿ ತಿರುಗುತ್ತಾ ಕಾಶೀ ಕ್ಷೇತ್ರಕ್ಕೆ ಬರಲು ಕಾಪಾಲವು ಆತನ ಕೈಯಿಂದ ಜಾರಿತು ಎಂಬ ಅಂಶ ಶಿವಶತರುದ್ರ ಪುರಾಣದಿಂದ ತಿಳಿಯುತ್ತದೆ. ಭೈರವನನ್ನು ಕುರಿತು ವರಾಹ ಪುರಾಣ, ಕೂರ್ಮ ಪುರಾಣ, ಶ್ರೀ ತತ್ವನಿಧಿ ವಿಷ್ಣು ಧರ್ಮೋತ್ತರ ಪುರಾಣಗಳಲ್ಲಿ ಉಲ್ಲೇಖಗಳಿವೆ.


ಹದಿನಾಲ್ಕು ನಾಥ ಸಂಪ್ರದಾಯ ಮಠಗಳ ಪೈಕಿ ಆದಿಚುಂಚನಗಿರಿ ಮಠವೂ ಒಂದು. ಉತ್ತರ ಭಾರತದಲ್ಲಿ ಹೆಚ್ಚು ಪ್ರಚಾರದಲ್ಲಿದ್ದ ಮತ ಕರ್ನಾಟಕದಲ್ಲಿಯೂ ಇತ್ತು ಎಂಬುದಕ್ಕೆ ಕೆಲವು ಆಧಾರಗಳಿವೆ. ಶಂಕರಾಚಾರ್ಯರು ತಾವು ಕರ್ನಾಟಕಕ್ಕೆ ಹೋಗುವುದಾಗಿ ಹೇಳಿದಾಗ, ಅಲ್ಲಿ ಕಾಪಾಲಿಕರು ಹೆಚ್ಚು. ಆದ್ದರಿಂದ ಹೋಗಬೇಡವೆಂದು ವಿದರ್ಭದ ರಾಜ ಸೂಚಿಸಿದನೆಂದು ವಿದ್ಯಾರಣ್ಯರ (೧೪ನೆ ಶತಮಾನ) ಶಂಕರ ದಿಗ್ವಿಜಯ ಹೇಳುತ್ತದೆ. ಯಶಸ್ತಿಲಕ ಚಂಪೂ ಗ್ರಂಥದಲ್ಲಿ (೧೦ನೆ ಶತಮಾನ) ತಮ್ಮ ದೇಹದ ಮಾಂಸವನ್ನೇ ಮಾರುತ್ತಿದ್ದ ಮಹಾವ್ರತಿಗಳ ಪ್ರಸ್ತಾಪವಿದೆ. ಚೆನ್ನಬಸವಣ್ಣನವರು ಮಹಾವ್ರತಿಗಳನ್ನು ಹೆಸರಿಸುತ್ತಾರೆ. ಅಲ್ಲಮಪ್ರಭು ಕಾಪಾಲಿಕರ ಕೆಲವು ಆಚರಣೆಗಳನ್ನು ತಮ್ಮ ವಚನದಲ್ಲಿ ಖಂಡಿಸಿದ್ದಾರೆ. ಶ್ರೀಶೈಲದಲ್ಲಿ ಗೋರಕ್ಷನೆಂಬುವನನ್ನು ಅಲ್ಲಮಪ್ರಭು ವಾದದಲ್ಲಿ ಸೋಲಿಸಿ ಅವನಲ್ಲಿ ದೈವೀ ಪ್ರಜ್ಞೆಯನ್ನು ಮೂಡಿಸಿದ ಅಂಶ ಪ್ರಭುಲಿಂಗ ಲೀಲೆಯಲ್ಲಿ ಉಲ್ಲೇಖಿತವಾಗಿದೆ. ಶ್ರವಣಬೆಳಗೊಳದ ೧೧೦೦ರ ಒಂದು ಶಾಸನದಲ್ಲಿ ಕಾಪಾಲಿಕರು ಹಸಿಯ ತಲೆಗಳನ್ನು ಪೋಣಿಸಿ ಮಾಲೆ ಹಾಕಿ ಕೊಳ್ಳುತ್ತಿದ್ದ ವಿಷಯವಿದೆ. ೧೧೪೮ರ ಒಂದು ಶಾಸನದಲ್ಲಿ ಮಹಾಪ್ರತಿಮೆಗಳನ್ನು ಹೆಸರಿಸಲಾಗಿದೆ. ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿರುವ ಕೆಲವು ಸಮಾಧಿಗಳು ಕಾಪಾಲಿಕರದೆಂದು ಹೇಳುತ್ತಾರೆ, ಶಿವನ ಉಗ್ರರೂಪವಾದ ಭೈರವನನ್ನು ಆರಾಧಿಸುತ್ತಾರೆ.


ವಿಜಯನಗರದ ಅರಸ ಸಾಳ್ವ ನರಸಿಂಗನ ಕಾಲದಲ್ಲಿ ಅವನ ಮನೆಯ ಪ್ರಧಾನ ವಿರೂಪಾಕ್ಷದೇವ ಅಣ್ಣ ಎಂಬಾತನು ಚುಂಚನ ಭೈರವ ದೇವರಿಗೆ ಚುಂಚನಹಳ್ಳಿ ಎಂಬ ಗ್ರಾಮವನ್ನು ವಿರೂಪಾಕ್ಷಪುರ ಎಂದು ಹೆಸರಿಟ್ಟು ಮಕರ ಸಂಕ್ರಾಂತಿ ಪುಣ್ಯಕಾಲದಲ್ಲಿ ದಾನ ನೀಡಿದ. ವಿಷಯವನ್ನು ತಿಳಿಸುವ ಶಾಸನ ಕಾಲ ಕ್ರೋಧಿ ಸಂವತ್ಸರ ಆಶ್ವೀಜ ಶುದ್ಧ ಬುಧವಾರ ಅಂದರೆ ೧೪೮೪ ಸೆಪ್ಟೆಂಬರ್ ೨೩, ಗುರುವಾರ.


ಆದಿಚುಂಚನಗಿರಿ ಕ್ಷೇತ್ರಕ್ಕೆ ಭೈರ ಕ್ಷೇತ್ರ ಎಂಬ ಮತ್ತೊಂದು ಹೆಸರಿತ್ತು. ವಿಷಯವನ್ನು ತಿಳಿಸುವ ಶಾಸನದ ಕಾಲ ಕಲಿವರ್ಷ ೪೯೯೬ ಶಕವರ್ಷ ೧೮೧೭ ಮನ್ಮಥ ಸಂವತ್ಸರ ಫಾಲ್ಗುಣ ಬಹುಳ ೧೩, ಗುರುವಾರ: ಅಂದರೆ ೧೮೯೬ ಮಾರ್ಚ್‌೧೨ ಗುರುವಾರ.


ಈವರೆಗೆ ನೋಡಿದ ಪುರಾಣ, ಐತಿಹ್ಯ, ಶಾಸನಗಳಿಂದ ತಿಳಿದುಬಂದ ವಿಷಯಗಳ ಆಧಾರಗಳ ಸಹಾಯದಿಂದ ಆದಿಚುಂಚನಗಿರಿ ಮತ್ತು ಅಲ್ಲಿನ ಭೈರವನ ಬಗ್ಗೆ ಒಂದು ಕಲ್ಪನೆಯನ್ನು ರೂಪಿಸಿಕೊಳ್ಳಬಹುದು.


ಶ್ರೀ ಆದಿಚುಂಚನಗಿರಿಯಲ್ಲಿ ಪ್ರಮುಖವಾಗಿ ನೋಡಬಹುದಾದ ಕೆಲವು ಮುಖ್ಯ ಸ್ಥಳಗಳನ್ನು ಇಲ್ಲಿ ಹೆಸರಿರಿ, ಸ್ಥೂಲವಾಗಿ ಪರಿಚಯ ಮಾಡಿಕೊಳ್ಳಬಹುದು. ) ಅನ್ನ ದಾನಿ ಅರೆ, ) ಕಂಬದ ಮಾರಮ್ಮ ) ಶ್ರೀಮಠ ) ಬಿಂದು ಸರೋವರ, ನಾಗ ಚಾವಡಿ ) ಉರಿಗದ್ದಿಗೆ ) ಸಿಂಹಾಸನ ) ಶ್ರೀಕಾಲ ಭೈರವ ದೇವಸ್ಥಾನ ) ಸಮಾಧೀ ಮಂಟಪಗಳು )ತಪೋಗುಹೆ ೧೦) ಅನ್ನಪೂರ್ಣೆಶ್ವರಿ ೧೧)ಮೇದರ ತಲೆಗಳು ೧೨)ಗಂಗಾಧರೇಶ್ವರ ದೇವಾಲಯ ೧೩) ಗವಿಸಿದ್ಧನ ಗುಡಿ ೧೪)ಆಕಾಶ ಭೈರವನ ನೆಲೆ (ಗಳಿಗೆಗಲ್ಲು) ೧೫) ಕತ್ತಲ ಸೋಮೇಶ್ವರ ೧೬) ಚೇಳೂರು ಕಂಬ ೧೭)ನಾಗರಕಲ್ಲು ೧೮) ಸಪ್ಪೇಸ್ವಾಮಿ ಗುಹೆ ಮುಖ್ಯವಾದವು.


ಅನ್ನದಾನಿ ಅರೆಯ ಮೇಲೆ ಮೊದಲು ಕಂಬದ ಮಾರಮ್ಮನ ದರ್ಶನವನ್ನು ಪಡೆಯಬಹುದು. ಕ್ಷೇತ್ರಪಾಲಕಿಯಾದ ಕಂಬದಮ್ಮ ಪಾರ್ವತಿಯ ಪ್ರತೀಕ. ಮೊಸರು, ಹಣ್ಣಿನ ಅಭಿಷೇಕ ಕಂಬದಮ್ಮನಿಗೆ ನಡೆಯುತ್ತದೆ. ಸುತ್ತಣ ಹಳ್ಳಿಗಳಲ್ಲಿ ಕಂಬದ ಮಾರಮ್ಮನ ಹಬ್ಬವನ್ನು ಮಾಡುತ್ತಾರೆ.


ಕಂಬದ ಮಾರಮ್ಮನ ಸನ್ನಿದಿಯಿಂದ ಸ್ವಲ್ಪ ಮುಂದೆ ಹೋದರೆ ಬಿಂದು ಸರೋವರ, ಇದನ್ನು ಕಲ್ಯಾಣಿ ಎಂದು ಕರೆಯುತ್ತಾರೆ. ಕಲ್ಯಾಣಿಯಿಂದ ಶ್ರೀಮಠದ ಮಹಾದ್ವಾರದ ಬಳಿಗೆ ಬಂದರೆ ಶ್ರೀ ಕಾಲಭೈರವನ ದೇವಸ್ಥಾನ. ಶ್ರೀ ಕಾಲಭೈರವ ದೇವಾಲಯ ಕಲಾತ್ಮಕವಾದುದಲ್ಲವಾದರೂ ಕರಿಯ ಕಲ್ಲಿನ ಭೈರವ ವಿಗ್ರಹ ಆಕರ್ಷಕವಾಗಿದೆ. ಬಾಗಿಲು ಭೈರವನ ದರ್ಶನವಾದನಂತರ ಶ್ರೀ ಮಠದ ಒಳಗಡೆ ಪ್ರವೇಶಿಸಿದರೆ ನಮ್ಮ ಬಲಕ್ಕೆ ಕ್ಷೇತ್ರದ ಜ್ವಾಲಾಪೀಠ (ಉರಿಗದ್ದಿಗೆ), ಎಡಭಾಗಕ್ಕೆ ನಾಗಚಾವಡಿಯೂ ಸಿಕ್ಕುತ್ತದೆ. ಚುಂಚನಗಿರಿ ಗುರು ಪರಂಪರೆಯ ಆದಿಗುರು ಶ್ರೀ ಸಿದ್ಧಯೋಗಿ ಪರಮೇಶ್ವರನಿಂದ ನೇರವಾಗಿ ದೀಕ್ಷೆಯನ್ನು ಪಡೆದವನು ಎಂಬ ನಂಬಿಕೆಯಿದೆ. ಪೀಠ ಈಶ್ವನಿಂದ ಸ್ಥಾಪಿಸತವಾದ ಆದಿಪೀಠವಾಯಿತು. ಆದುದರಿಂದಲೇ ಆದಿ ಚುಂಚನಗಿರಿ ಎಂಬ ಹೆಸರು ಕ್ಷೇತ್ರಕ್ಕೆ ಬಂದಿದೆ. ಶ್ರೀ ಸಿದ್ಧಯೋಗಿ ಪೀಠದ ಮೇಲೆ ಕುಳಿತುಕೊಳ್ಳುತ್ತಿದ್ದರೆಂದು ಸ್ಥಳ ಪುರಾಣ ಹೇಳುತ್ತದೆ. ಈಗಲೂ ಮಹಾನವಮಿ, ಮಹಾಶಿವರಾತ್ರಿ, ರಥೋತ್ಸವ ಮೂರು ವಿಶಿಷ್ಟ ಸಂದರ್ಭಗಳಲ್ಲಿ ಪೀಠಾಧಿಪತಿಗಳು ಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನ ಕೊಡುತ್ತಾರೆ.


ಶ್ರೀಮಠದ ಆವರಣದಿಂದ ಗಿರಿಯನ್ನು ಏರಿದರೆ ಮೊದಲ ಮಂಟಪವೊಂದರಲ್ಲಿ ಎದುರಾಗುವುದೇ ಮೂರುಮೇದರ ತಲೆಗಳು. ಶಿಲೆಯಿಂದ ಕೆತ್ತಲ್ಪಟ್ಟ ತಲೆಗಳ ಬಗ್ಗೆ ಖಚಿತವಾಗಿ ಹೇಳಲು ಸಾಕಷ್ಟು ಆಧಾರಗಳಿಲ್ಲ. ಆದರೆ ಬೆಟ್ಟದಲ್ಲಿ ಬಿದಿರನ್ನು ಕಡಿಯಲು ಬಂದು ಗಂಗಾಧರೇಶ್ವರನನ್ನು ಮೊದಲು ಗುರುತಿಸಿದವರು ಆರಣಿಯ ಪಾಳೆಯಗಾರರ ಕಡೆಯ ಮೂರು ಮಂದಿ ಮೇದರು ಎಂಬ ಐತಿಹ್ಯವಿದೆ. ಆರಣಿಯ ಪಾಳೆಯಗಾರನೊಬ್ಬನಿಗೆ ಗಂಡುಮಕ್ಕಳಾಗಲಿಲ್ಲ. ಗಂಡು ಮಗುವಾದರೆ ಗಿಣ್ಣಿಲ್ಲದ ಬಿದಿರಿನಲ್ಲಿ ತೊಟ್ಟಿಲನ್ನು ಕಟ್ಟಿಸುವುದಾಗಿ ಹರಕೆ ಹೊತ್ತನು. ಮಗುವಾಯಿತು. ಗಿಣ್ಣಿಲ್ಲದ ಬಿದಿರು ಎಲ್ಲಿ ದೊರೆಯುತ್ತದೆ. ಅದನ್ನು ಹುಡುಕುತ್ತಾ ಮೂರು ಮಂದಿ ಮೇದರು ಚುಂಚನಗಿರಿಯ ಕಾಡಿಗೆ ಬಂದರು. ಬೆಟ್ಟವನ್ನು ಹತ್ತಿ ಬೆಟ್ಟದ ಮೇಲೆ ಗಿಣ್ಣಿಲ್ಲದ ಬಿದಿರೊಂದನ್ನು ಗುರುತಿಸಿ ಅದನ್ನುಮುಚ್ಚಿನಿಂದ ಕಡಿದರು. ಕೂಡಲೇ ಅವರುಕಂಡ ದೃಶ್ಯ. ಬಿದಿರಿನಲ್ಲಿ ಹೊರಚಿಮ್ಮಿದ ರಕ್ತ, ಹಿಂದಿರುಗಿ ನೋಡದೆ ಹೊರಟು ಹೋಗುವಂತೆ ಯಾರೋ ನುಡಿದಂತಾಯಿತು. ಗಾಬರಿಗೊಂಡ ಮೇದರು ದಿಕ್ಕು ದಿಕ್ಕಿಗೆ ಓಡಿದರು.ಕುತೂಹಲದಿಂದ ಹಿಂದಿರುಗಿ ನೋಡಿದರು. ಚುಂಚನಗಿರಿಯ ಹಿಂಭಾಗದಲ್ಲಿ ಒಬ್ಬ ಅಸುನೀಗಿದ. ಮತ್ತೊಬ್ಬ ಜೀರಳ್ಳಿ ಸಮೀಪದ ಗುಡ್ಡದ ಬಳಿ ಅಸುನೀಗಿದ. ಮೂರನೆಯವನ ಗತಿ ಏನಾಯಿತೆಂಬುದು ಸರಿಯಾಗಿ ತಿಳಿದಿಲ್ಲ. ಮೂವರ ತಲೆಗಳನ್ನು ಅವರ ನೆನಪಿಗಾಗಿ ಇಲ್ಲಿ ಕಡೆದಿಡಲಾಗಿದೆ. ಆರಣಿಯ ಪಾಳೆಯಗಾರರ ಕನಸಿನಲ್ಲಿ ಗಂಗಾಧರ ಕಾಣಿಸಿಕೊಂಡು ಅಲ್ಲಿ ಗುಡಿ ಗೋಪುರಗಳನ್ನು ಕಟ್ಟಿ, ತನಗೆ ನಡೆದುಕೊಳ್ಳುವಂತೆ ಸೂಚಿಸಿದನೆಂದು ಐತಿಹ್ಯಗಳು ಹೇಳುತ್ತವೆ.


ಶ್ರೀ ಗಂಗಾಧರೇಶ್ವರ ಪಂಚಲಿಂಗಗಳಲ್ಲೊಂದು. ಉಳಿದ ಲಿಂಗಗಳು ಗವಿಸಿದ್ಧೇಶ್ವರ, ಕತ್ತಲ ಸೋಮೇಶ್ವರ, ಈಶ್ವರ, ಚಂದ್ರಮೌಳೇಶ್ವರ. ಗಂಗಾಧರೇಶ್ವರ ಲಿಂಗವುಮೇದರ ಮಚ್ಚಿನೇಟಿನಿಂದ ಆದ ಗುರುತಿನಿಂದಾಗಿ ಈಗಲೂ ಭಿನ್ನವಾಗಿರುವಂತೆ ತೋರುತ್ತದೆಂದು ಹೇಳುತ್ತಾರೆ. ಹಾಗೆಯೇ ಗಿಣ್ಣಿಲ್ಲದ ಬಿದಿರನ್ನೂ ದೇವಾಲಯದ ಗೋಪುರದಲ್ಲಿ ಅಳವಡಿಸಿದ್ದಾರೆಂದು ಜನಪ್ರತೀತಿ. ಪಾರ್ವತಿ ಮತ್ತು ಗಂಗಾಧರನ ಉಪತ್ನಿ ಮಾಳಮ್ಮನ ಗುಡಿಗಳು ಇವೆ.


ಆದಿಚುಂಚನಗಿರಿ ಭೈರವನನ್ನು ಕಾಲಭೈರವ, ಬಾಗಿಲು ಭೈರವ, ಬೆಟ್ಟದ ಭೈರವ ಗುಡಿಯ ಭೈರವ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಪರಮೇಶ್ವರ ಸ್ವರೂಪಿ ಯಾದ ಭೈರವ ಹೆಸರಿನಲ್ಲಿಯೇ ಒಕ್ಕಲು ನಡೆದುಕೊಳ್ಳುವರು. ಕೆಲವರಿಗೆ ಮನೆದೈವ, ಕುಲದೈವ ಭೈರವನೇ "ಬೆಟ್ಟದ ಭೈರವನ ಹುಟ್ಟೋಕ್ಕಲು" ಎಂದು ಜನ ತಮ್ಮನ್ನು ಕರೆದುಕೊಳ್ಳುತ್ತಾರೆ. ಭೈರವನ ಒಕ್ಕಲು ಹಲವು ಜಾತಿಗಳಿಗೆ ಮೀಸಲಾದುದು. ಶ್ರೀ ಆದಿಚುಂಚನಗಿರಿ ಭೈರವ ಪಂಥಕ್ಕೆ ಸೇರಿದ ಗುಡ್ಡರನ್ನು ಜೋಗಪ್ಪಗಳೆಂದು ಕರೆಯುತ್ತಾರೆ. ಕೇವಲ ದೈವ ಸಂಬಂಧವಾದ ಆಚರಣೆಗಳನ್ನು ನಡೆಸಿ ಕೊಂಡು ಬರುವ ದೇವರ ಮಕ್ಕಳು ಇವರು. ಕಿನ್ನರಿ ಜೋಗಿಗಳು ಭೈರವನ ಆರಾಧಕರು. ಚುಂಚನಗಿರಿಯೂ ಇವರ ಮುಖ್ಯ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಇವರನ್ನು ಭೈರೇ ಜೋಗಿಗಳೆಂದು ಕರೆಯುತ್ತಾರೆ. ಆದರೆ ಕಿನ್ನರಿಜೋಗಿಗಳಿಗೂ ಜೋಗಪ್ಪಗಳಿಗೂ ಯಾವ ವಿಧವಾದ ಸಂಬಂಧವೂ ಇಲ್ಲ.


ಪಾಂಡವರು ವನವಾಸದಲ್ಲಿದ್ದಾಗ ಜೋಗಿಗಳನ್ನು ಗುರುತಿಸಿ ಸಿಂಗನಾದವನ್ನು ಊದಿಕೊಂಡು ಇದ್ದ ಇವರಿಗೆ ಕಿನ್ನರಿಯನ್ನು ಕೊಟ್ಟರು. ಪಂಚಪಾಂಡವರನ್ನು ಕೊಂಡಾಡಿಕೊಂಡಿರಿ ಎಂದು ಹೇಳಿದರು ಎಂಬ ವಿಷಯವನ್ನುಹೇಳುತ್ತಾರೆ. ಕಿನ್ನರಿ ಜೋಗಿಗಳು ಯಾವ ಪಂಥ, ಧರ್ಮಗಳಿಗೆ ಸಂಬಂಧಪಟ್ಟ ಧಾರ್ಮಿಕ ಕಾವ್ಯವನ್ನು ಹಾಡುವುದಿಲ್ಲ, ಆದರೆ ಮಹಾಭಾರತವನ್ನು ಅನೇಕ ರಾತ್ರಿಗಳು ಹಾಡುತ್ತಾರೆ.


ಕಿನ್ನರಿ ಜೋಗಿಯ ವರ್ಣನೆಗಳು ಮೇಲಿಂದ ಮೇಲೆ ಜನಪದ ಸಾಹಿತ್ಯದಲ್ಲಿ ಬರುವುದನ್ನು ಕಾಣಬಹುದು. ಚುಂಚನಗಿರಿಯ ಭೈರವನೇ ಕಿನ್ನರಿಯನ್ನು ಹಿಡಿದು ನುಡಿಸುವ ಭವ್ಯಚಿತ್ರವೊಂದು ಜನಪದ ಗೀತೆಯಲ್ಲಿ ಕಂಡುಬರುತ್ತದೆ.


ಚುಂಚನಗಿರಿಯಪ್ಪ ಸೂಜಿಗಲ್ಲಿನ ಮೇಲೆ

ನಿಂತು ಕಿನ್ನುಡಿಯ ನುಡಿಸೋನೆ! ಭೈರುವ

ನಿನ್ನ ಸೊಲ್ಲಾದವೆಲ್ಲ ಅಪರಂಜಿ


ಜೋಗಪ್ಪಗಳು, ತಿರುಪತಿ ವೆಂಕಟರಮಣನ ಒಕ್ಕಲುಗಳಿಗೆ ಸಂಬಂಧಪಡುವ ದಾಸಯ್ಯಗಳಂತೆ ಚುಂಚನಗಿರಿಯ ಭೈರವನ ಒಕ್ಕಲುಗಳಿಗೆ ಸಂಬಂಧಪಡುತ್ತಾರೆ. ಒಕ್ಕಲುಗಳು ಇರುವ ಕಡೆಗಳಲ್ಲೆಲ್ಲಾ ಗ್ರಾಮಕ್ಕೊಬ್ಬನೋ ಹಲವು ಗ್ರಾಮಕ್ಕೆ ಒಬ್ಬನೋ ಜೋಗಪ್ಪನಿದ್ದು ಅವರ ಧಾರ್ಮಿಕ ಸಂಪ್ರದಾಯಗಳಲ್ಲಿ, ಆಚರಣೆಗಳಲ್ಲಿ ಭಾಗಿಯಾಗಬೇಕು; ಮುಖ್ಯ ಸೂತ್ರಧಾರನಾಗಿ ಪೂಜೆಯನ್ನು ನಡೆಸಿಕೊಡಬೇಕು. ಆದಿಚುಂಚನಗಿರಿಯಲ್ಲಿಚೂರದಾರ’ ಎಂಬವರಿದ್ದಾರೆ. ಇವರು ಶ್ರೀಮಠದ ಗುರುವಿನ ಪ್ರತಿನಿಧಿಯಾಗಿ ಜೋಗಪ್ಪಗಳಿಗೆ ದೀಕ್ಷೆಯನ್ನು ಕೊಡುತ್ತಾರೆ. ಚೂರದಾರರು ಭೈರವನ ಪ್ರತಿನಿಧಿಯಾಗಿ ಜೋಗಪ್ಪಗಳಂತೆಯೇ ಭಕ್ತಾದಿಗಳಿಗಾಗಿ ಪೂಜೆಯನ್ನು ನಡೆಸಿಕೊಡುತ್ತಾರೆ.


ಚುಂಚನಗಿರಿ ಕ್ಷೇತ್ರಕ್ಕೆ ಎಲ್ಲ ಜಾತಿಮತಗಳಿಗೆ ಸಂಬಂಧಪಟ್ಟವರೂ ನಡೆದುಕೊಳ್ಳುವುದರಿಂದ ವಿವಿಧ ಮತಕ್ಕೆ ಸಂಬಂಧಪಟ್ಟ ಜೋಗಿಗಳೂ ಕಂಡುಬರುತ್ತಾರೆ. ಚುಂಚನಗಿರಿಯ ಸಮೀಪದ ಚುಂಚನಹಳ್ಳಿ, ಪಾಳ್ಯ ಗ್ರಾಮಗಳಲ್ಲಿ ಮಾತ್ರ ಕಾಪಾಲಿ ಸೇರಿದ ಜೋಗಪ್ಪಗಳನ್ನು ಗುರುತಿಸಬಹುದು. ಉಳಿದ ಕಡೆಗಳಲ್ಲಿ ಒಕ್ಕಲಿಗರ ಹಾಗೂ ಹರಿಜನರ ಜೋಗಪ್ಪಗಳು ಹೆಚ್ಚಾಗಿ ಕಂಡುಬರುತ್ತಾರೆ. ಜೋಗಿಗಳಿಗೆ ವಿವಾಹ ಪೂರ್ವದಲ್ಲಿ ಚುಂಚನಗಿರಿ ಮಠದ ಸ್ವಾಮಿಗಳು ದೀಕ್ಷೆ ನೀಡುತ್ತಾರೆ. ದೀಕ್ಷೆ ದೇವರ ಪ್ರೇರಣೆಯ ಮೇಲೆ ಆಗುತ್ತದೆಂಬ ನಂಬಿಕೆಯುಂಟು. ಸ್ವಪ್ನದಲ್ಲಿ ದೇವರು ಜೋಗಿಯನ್ನು ಬಿಡುವಂತೆ ಕೇಳಬಹುದು. ಜೋಗಿಯಾಗುತ್ತಾನೆಂದು ಜ್ಯೋತಿಶಾಸ್ತ್ರದಲ್ಲಿ ಹೇಳಬಹುದು. ಕಷ್ಟ ಕಾರ್ಪಾಣ್ಯಗಳು ಒದಗಿದಾಗ ಹರಕೆ ಹೊತ್ತು ಮಗನನ್ನು ಜೋಗಿ ಬಿಡಬಹುದು. ವಂಶ ಪಾರಂಪರ‍್ಯವಾಗಿಯೂ ಜೋಗಪ್ಪನನ್ನು ಬಿಡುವ ಸಂಪ್ರದಾಯ ಉಂಟು.


ದೀಕ್ಷೆಯ ದಿವಸ ಹುಡುಗನನ್ನು ಬಂಧು ಬಳಗದೊಡನೆ ಚುಂಚನಗಿರಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಒಂದು ಪುಟ್ಟ ಸಮಾರಂಭವೇ ನಡೆಯುತ್ತದೆ. ಗುರುವಿನಿಂದ ದೀಕ್ಷೆಯಾದ ಮೇಲೆ ಹುಡುಗನ ಮೆರವಣಿಗೆ ಆಗುತ್ತದೆ. ಲಾಂಛನವಾಗಿ ಎಂದು ಹೇಳುವರು. ಮರಿ ಜೋಗಿಗೆ ಒಂದು ಸಿಂಗನಾದ ಕಿವಿಗೆ ಚಿನ್ನದ ಅಥವಾ ಹಿತ್ತಾಳೆಯ ಉಂಗುರ ಇದಕ್ಕೆ ಮುದ್ರೆ ಒಂದು ತಾಮ್ರದ ಪಾತ್ರೆ ಕೊಡಲಾಗುವುದು. ಕೊರಳ ರುದ್ರಾಕ್ಷಿ, ಹಣೆಯ ವಿಭೂತಿ ಇವೂ ಜೋಗಿಯ ಸಂಕೇತಗಳೇ ಆಗಿವೆ. ತ್ರಿಶೂಲ ಇರಲೇಬೇಕು. ದೀಕ್ಷೆಯ ದಿವಸ ಮುಕ್ಕಣ್ಣ ಕುಲಾವಿಯನ್ನು ಜೋಗಿಗೆ ತೊಡಿಸಲಾಗುವುದು. ಒಂದು ಕಾವಿಯ ವಸ್ತ್ರವನ್ನುಮೈಮೇಲೆ ಹೊದಿಸಲಾಗುವುದು. ಆದರೆ ಇವುಗಳನ್ನು ಜೋಗಪ್ಪ ಕೊನೆಯವರೆಗೂ ಉಳಿಸಿಕೊಳ್ಳಬೇಕಾಗಿಲ್ಲ, ಎಕೆಂದರೆ ಈತ ಮುಂದೆ ಸಂಸಾರಿಯಾಗಿ ಬದುಕುತ್ತಾನೆ, ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ಇವನ ಪಾತ್ರ ಮುಖ್ಯವಾದುದು.


ಸಿಂಗನಾದ ಜೋಗಪ್ಪಗಳ ವಾದ್ಯ, ಇದು ಯಾವ ಹಾಡುಗಾರಿಕೆಗೂ ವಾದ್ಯವಾಗಿ ಬಳಕೆಯಾಗುವುದಿಲ್ಲ. ಕೇವಲ ಪೂಜಾ ಸಂದರ್ಭದಲ್ಲಿ ಊದುವುದಕ್ಕಾಗಿ ಇದನ್ನುಬಳಸುತ್ತಾರೆ. ಸಿಂಗನಾದ ಜಿಂಕೆಯ ಕೊಂಬಿನ ವಾದ್ಯ. ಜಿಂಕೆಯ ಕೊಂಬು ಸಿಕ್ಕದ ಕಡೆ ಬೆಳ್ಳಿಯ ಸಿಂಗನಾದವನ್ನು ಬಳಸುತ್ತಾರೆ. ಸಿಂಗನಾದ ಜೋಗಪ್ಪನ ಕೊರಳಲ್ಲಿ ಸದಾ ಇರಬೇಕಾದ ಲಾಂಛನ. ಲಿಂಗವಂತರಲ್ಲಿ ಕರಡಿಗೆ ಇರುವಂತೆ ಕುರಿಯ ಉಣ್ಣೆಯ ದಾರದಿಂದ ಇದನ್ನುಕೊರಳಿಗೆ ಕಟ್ಟಿಕೊಂಡು ಇಳಿಬಿಟ್ಟಿರುತ್ತಾರೆ. ಜೋಗಪ್ಪಗಳು ನಿತ್ಯವೂ ದೇವರ ಹೆಸರನ್ನು ಹೇಳಿ ಸಿಂಗನಾದವನ್ನು ಒಮ್ಮೆ ಊದಿಯಾವುದೇ ಕಾರ‍್ಯದಲ್ಲಿ ತೊಡಗುತ್ತಾರೆ.


ಜೋಗಪ್ಪನ ಪಾತ್ರೆ ವಿಶಿಷ್ಟವಾದುದು. ಕಪಾಲದ ಆಕಾರದ ಪಾತ್ರೆ ಬ್ರಹ್ಮ ಕಪಾಲದ ಸಂಕೇತವೆ ಆಗಿದೆ. ಇದನ್ನು ಕಡ್ಡಾಯವಾಗಿ ಧಾರ್ಮಿಕ ಆಚರಣೆಗಳಲ್ಲಿ ಬಳಸಲೇಬೇಕು. ಒಂದು ಎಡೆಯನ್ನು ಪಾತ್ರೆಗೂ ಅರ್ಪಿಸಬೇಕು. ಜೋಗಪ್ಪಗಳು ವಾರದ ದಿನವನ್ನಾಗಿ ಭಾನುವಾರವನ್ನು ಆಚರಿಸುತ್ತಾರೆ ಅದು ಭೈರವನ ವಾರ. ದಿನ ಮನೆಯನ್ನು ಸಾರಿಸಿ. ರಂಗವಲ್ಲಿ ಹಾಕಿ ಮಡಕೆ ಕುಡಿಕೆ ಪಾತ್ರೆ ಪದಾರ್ಥಗಳನ್ನು ತೊಳೆದು ಸ್ನಾನಮಾಡಿ ಮಡಿಯುಟ್ಟು ಬಿರುದುಗಳನ್ನೆಲ್ಲಾ ಪೂಜಿಸಬೇಕು. ಅಂದು ಒಂದು ಹೊತ್ತು ಮಾತ್ರ ಊಟ ಮಾಡಬೇಕು ಜೋಗಪ್ಪ. ಜೋಗಪ್ಪಗಳು ಭಾನುವಾರ ಭಿಕ್ಷೆ ಎತ್ತುವ ಸಂಪ್ರದಾಯವಿತ್ತು ಎನ್ನುವುದಕ್ಕೆ ಜನಪದ ಸಾಹಿತ್ಯದಲ್ಲಿ ಆಧಾರವಿದೆ.


ಎಂಥವನೆ ಜೋಗಿ ಪಂಥವನಾಡುತ ಬಂದ

ನೀಡೆ ಹಿರಿಯಕ್ಕ ಬಿಕ್ಷವ ಬೆಟ್ಟದ

ಜೋಗಿ ಬಂದವನೆ ಬಾಗಿಲಿಗೆ


ವಾರದ ಜೋಗಿ ಊರಿಗೆ ಬಂದವನೆ

ವಾರವ ಕೇಳೆ ಹಿರಯಕ್ಕಜೋಗಿಯ

ತೇರು ಯಾವಾಗ ಹರಿದಾವು


ತೇರು ಕಾಮನ ಹುಣ್ಣಿಮೆ ತೀರ್ಥ ಮೂರುನೆ ದಿನಕೆ

ಭೂತನ ಸೇವೆ ಮರುದಿನಕೆ ಆದಾವೆಂದು

ವಾರದ ಜೋಗಿ ನುಡಿದನು


ಮೈಸೂರು ಕಡೆಯಲ್ಲಿ ಭೈರವ ಭಕ್ತರಾದ ಜೋಗಪ್ಪಗಳು ಭಾನುವಾರ ತಮ್ಮ ಎಲ್ಲ ಬಿರುದುಗಳನ್ನು ಧರಿಸಿ ಕಾವಿಯ ವಸ್ತ್ರವನ್ನುಟ್ಟು ಹೆಗಲಲ್ಲಿ ದೊಡ್ಡ ತ್ರಿಶೂಲವನ್ನು ಇಟ್ಟುಕೊಂಡು ಸಿಂಗನಾದವನ್ನು ಊದುತ್ತಾ ಭಿಕ್ಷಾಟನೆಗೆ ಬರುವುದನ್ನು ಇಂದಿಗೂ ಕಾಣಬಹುದು. ವ್ಯವಸಾಯವನ್ನು ಅವಲಂಭಿಸಿ ಜೀವಿಸುವ ಬಹುಕಾಲ ಜೋಗಿಗಳು ಭಿಕ್ಷಾಟನೆಯನ್ನು ಕೈಬಿಡುತ್ತಿದ್ದಾರೆ. ಅಂಥವರು ಧಾರ್ಮಿಕ ಆಚರಣೆಗಳಲ್ಲಿ ಮಾತ್ರ ತಮ್ಮ ಲಾಂಛನಗಳನ್ನು ಧರಿಸುವುದನ್ನು ಕಾಣಬಹುದು. ಭೈರವನ ಒಕ್ಕಲಿನವರು ಅನೇಕ ಆಚರಣೆಗಳಲ್ಲಿ ಜೋಗಪ್ಪನನ್ನು ಬರಮಾಡಿಕೊಳ್ಳಬೇಕಾಗುತ್ತದೆ. ದೇವರ ತೇರು, ಹಬ್ಬ, ಭುಕ್ತಿ, ಪಿತೃ ಪಕ್ಷ, ಉತ್ತರಕ್ರಿಯಾದಿ, ಮದುವೆ ಮುಂತಾದ ಸಂದರ್ಭದಲ್ಲಿ ಮನೆದೇವರ ಪ್ರತಿನಿಧಿಯಾದ ಜೋಗಪ್ಪ ಬರುತ್ತಾನೆ. ಇಲ್ಲಿ ದೇವರು ಎಂದರೆ ತ್ರಿಶೂಲ ಅಷ್ಟೆ. ಮದುವೆಯ ಹಿಂದಿನ ರಾತ್ರಿ ಚಪ್ಪರದ ಶಾಸ್ತ್ರ. ರಾತ್ರಿ ಜೋಗಪ್ಪ ಮಡಿ ಬಟ್ಟೆಯನ್ನು ಹಾಸಿ ಅದರ ಮೇಲೆ ಅಗ್ರದ ಬಾಳೆಯ ಎಲೆಯನ್ನು ಹಾಕಿ ಗೋಡೆಯ ಬದಿಯಲ್ಲಿ ತೊಳೆದ ಮಣೆಯೊಂದನ್ನು ಇಟ್ಟು ತಾನು ತಂದ ತ್ರಿಶೂಲಗಳನ್ನು ಇಡುತ್ತಾನೆ. ಅದರ ಮುಂದೆ ಮೂರು ಎಡೆಗಳನ್ನು ಇಡಲಾಗುವುದು. ಮಾಡಿದ ವಿಶೇಷ ಅಡುಗೆಯನ್ನೆಲ್ಲಾ ಎಡೆಗೆ ಬಡಿಸುತ್ತಾರೆ. ಮೂರು ಎಡೆಗಳಲ್ಲಿ ಒಂದು ಜೋಗಪ್ಪನಿಗೆ, ಇನ್ನೊಂದು ಅವನ ಪಾತ್ರೆಗೆ ಉಳಿದ ಒಂದು ಎಡೆ ಮನೆಯವರಿಗೆ ಪೂಜೆಯ ಅನಂತರ ಮನೆಯವರೆಲ್ಲರೂ ಜೋಗಪ್ಪನಿಂದ ವಿಭೂತಿ ಇಡಿಸಿಕೊಳ್ಳುತ್ತಾರೆ.


ಭೈರವನಿಗೆ ಹರಕೆ ಮಾಡಿಕೊಂಡ ಒಂದು ವಿಶೇಷ ಆಚರಣೆಯನ್ನು ನಡೆಸಲಾಗುವುದು. ಇದನ್ನುಭುಕ್ತಿ’ ಎಂದು ಕರೆಯುತ್ತಾರೆ. ಆಚರಣೆಯಲ್ಲಿಯೂ ಜೋಗಪ್ಪನಿರಬೇಕು. ಭುಕ್ತಿಯ ಬೆಳಿಗ್ಗೆ ದೇವರಿಗೆ ಮೊಸರು ಅನ್ನದ ತಳಿಗೆಯನ್ನು ಅರ್ಪಿಸುತ್ತಾರೆ. ಜೋಗಪ್ಪ ಒಂದು ದೇವರನ್ನು ಪೂಜಿಸಿ, ಮರಿಗೆ ತೀರ್ಥ ಹಾಕುವನು, ದೇವರ ಮುಂದೆ ಮರಿಯನ್ನು ಕಡಿಯಲಾಗುವುದು. ಮರಿ, ಕುರಿ ಅಥವಾ ಮೇಕೆ ಆಗಬಹುದು. ಅನಂತರ ಮರಿಯ ಅಡುಗೆಯನ್ನು ಮಾಡಿ ಜೋಗಪ್ಪನಿಂದ ದೇವರ ಪೂಜೆ ಮಾಡಿಸುತ್ತಾರೆ. ಮಾಂಸದ ಎಡೆಯನ್ನು ಆರು ದೊನ್ನೆಗಳಲ್ಲಿ ಇಡುತ್ತಾರೆ. ಆರರಲ್ಲಿ ಎರಡು ಮನೆಯವರಿಗೆ, ನಾಲ್ಕು ಜೋಗಪ್ಪನಿಗೆ ತೇರು, ಹಬ್ಬಗಳಲ್ಲಿ ಜೋಗಪ್ಪನನ್ನು ಕರೆಸಿ ಇದೇ ಕ್ರಮದಲ್ಲಿ ದೇವರಿಗೆ ಎಡೆಯನ್ನು ಅರ್ಪಿಸಲಾಗುವುದು. ಪಿತೃಪಕ್ಷದಲ್ಲಿ ಬ್ರಾಹ್ಮಣ ಪುರೋಹಿತರನ್ನು ಕರೆಸಿ ಮಧ್ಯಾಹ್ನ ಪಿತೃಗಳಿಗೆ ತರ್ಪಣ ಬಿಟ್ಟರೂ ರಾತ್ರಿ ಜೋಗಪ್ಪನನ್ನು ಬರಮಾಡಿಕೊಂಡು ಎಡೆಯನಿಟ್ಟು ಪೂಜಿಸಬೇಕು. ಪಿತೃಗಳಿಗೆ ಅರ್ಪಿಸುವ ಎಡೆ ಜೋಗಪ್ಪನ ಮೂಲಕವೇ ಸಲ್ಲಬೇಕು. ಇಲ್ಲಿ ಎಡೆ ಇಡುವುದಕ್ಕೆ ವಿಶೇಷವಾದ ಮಹತ್ವವನ್ನು ಕೊಡಲಾಗಿದೆ.


ಮನೆಯ ಸೂತಕ ಕಳೆಯಲು, ಉತ್ತರ ಕ್ರಿಯಾದಿಗಳಿಗೆ ದೇವರನ್ನುಪೂಜಿಸಲು ಜೋಗಪ್ಪನಿರಲೇಬೇಕು. ಒಟ್ಟಿನಲ್ಲಿ ಜೋಗಪ್ಪ ದೇವರ ಪ್ರತಿನಿಧಿ. ಧರ್ಮ ಗುರುವಿನ ಪ್ರತಿನಿಧಿ. ಧರ್ಮ ಪ್ರಸಾರಕ, ಆದ್ದರಿಂದಲೇ ಆದಿಚುಂಚನಗಿರಿಯ ಮಠವನ್ನು ಜೋಗಿಯ ಮಠ ಎಂದು ಕರೆಯಲಾಗಿದೆ. ಇಲ್ಲಿ ಭೈರವಜೋಗಪ್ಪಗಳ ನಡುವೆ ಯಾವ ಭಿನ್ನ ಭಾವವನ್ನು ಭಕ್ತರು ವ್ಯಕ್ತ ಪಡಿಸುವುದಿಲ್ಲ. ಭೈರವನ ಪ್ಯತಿನಿಧಿ ಜೋಗಪ್ಪ. ಆದುದರಿಂದಲೇ ಚುಂಚನಗಿರಿಯ ಒಕ್ಕಲುಗಳಲ್ಲಿ ಭೈರವನನ್ನು ಕಂಡಷ್ಟೇ ಭಕ್ತಿಯಿಂದ ಜೋಗಪ್ಪನನ್ನು ಕಾಣುತ್ತಾರೆ. ಇಲ್ಲಿ ಜೋಗಪ್ಪನಿಗೆ ಮಹತ್ವದ ಸ್ಥಾನವಿದೆ.


ಶ್ರೀ ಆದಿಚುಂಚನಗಿರಿ ಭೈರವನಿಗೆ ಸಂಬಂಧಪಟ್ಟ ಜನಪದ ಸಾಹಿತ್ಯವೂ ಸಾಕಷ್ಟು ಇದ್ದು ವೈವಿಧ್ಯತೆಯಿಂದ ಕೂಡಿದೆ. ಚುಂಚನಗಿರಿಯಂಥ ಪವಿತ್ರವೂ, ಪುರಾಣ ಪ್ರಸಿದ್ಧವೂ ಆದ ಕ್ಷೇತ್ರವನ್ನು ಕುರಿತು ಅನೇಕ ಗೀತೆಗಳು ನಮ್ಮ ನಾಡಿನ ಅನೇಕ ಭಾಗಗಳಲ್ಲಿ ದೊರಕುತ್ತವೆ. ಚುಂಚನಗಿರಿಯ ಪ್ರಾಶಸ್ತ್ಯವನ್ನು ಕುರಿತು, ನಿಸರ್ಗ ಸೌಂದರ‍್ಯವನ್ನು ಕುರಿತು, ಅದರ ಐತಿಹ್ಯವನ್ನು ಕುರಿತು ಸ್ಥಳವನ್ನೂ, ಸ್ಥಳದೇವತೆಗಳನ್ನು ಗುಣಗಾನವನ್ನು ದೈವಗಳ ಲೀಲಾವಿನೋದಗಳನ್ನು ಜನಪದ ಕವಿಗಳು ಮನಮುಟ್ಟುವಂತೆ ಹಾಡಿದ್ದಾರೆ.


ನವಿಲು ಕುಣಿದಾವೊ ಹಿಂಡ್ಹಕ್ಕಿ ಹಾಡ್ಯಾವೊ

ಹುಲ್ಲೆಯ ಮರಿ ಕುಣಿದಾವೊ ಚುಂಚನಗಿರಿಯ

ಸುತ್ತೆಲ್ಲ ಸ್ವಾಮಿ ನಲಿದಾನೊ


ದಾರಿಯ ಎರಡೂ ಕಡೆ ಹಬ್ಬಿರುವ ವನರಾಜಿಯ ಪ್ರಶಾಂತ ನೆರಳು, ತಂಡ ತಂಡವಾಗಿ ಕೇಕೆ ಹಾಕುತ್ತಾ ಗರಿಗೆದರಿ ನರ್ತಿಸುವ ನವಿಲುಗಳ ಹಿಂಡುಗಳನ್ನು ನೋಡಿದವರ ಮನಸ್ಸು ಅರುಳುತ್ತದೆ.


ನಿಂಬೆ ಹಣ್ಣಿಗೆ ಬಂದ ತುಂಬೆ ಹುವ್ವಿಗೆ ಬಂದ

ಇಂಬು ನೋಡಲು ಬಂದ ಭೈರವ ಚುಂಚನಗಿರಿಯ

ಇಂಬೊಳ್ಳೆದೆಂದು ನೆಲೆಗೊಂಡ


ಚುಂಚನಕಟ್ಟೆಯಿಂದ ಎಂಟುಗಂಟೆಗೆ ಬಂದ

ಪಂಚಮುಖದಯ್ಯ ನೆಲೆಗೊಂಡ ಚುಂಚನಗಿರಿಯ

ತೆಂಕ ಬಾಗಿಲು ತಾ ನಿಂತ


ತ್ರೇತ್ರಾಯುಗದಲ್ಲಿ ಶ್ರೀರಾಮನಿಗೆ ಗಜಾರಣ್ಯವನ್ನು (ಚುಂಚನಕಟ್ಟೆ) ಬಿಟ್ಟು ಕೊಟ್ಟು ನಿಸರ್ಗ ಸೌಂದರ‍್ಯದಿಂದ ಕೂಡಿರುವ ಚುಂಚನಗಿರಿಯ ಸೊಬಗಿಗೆ ಮಾರು ಹೋಗಿ ಇಲ್ಲಿ ನೆಲೆಸಿದನೆಂದು ಜನಪದ ಕವಿಗಳು ಪುರಾಣದ ಮೂಲವನ್ನು ಆಧರಿಸಿ ಚುಂಚನಗಿರಿ ಮತ್ತು ಭೈರವನ ಪ್ರಾಚೀನತೆಯತ್ತ ನಮ್ಮನ್ನು ಎಳೆಯುತ್ತಾರೆ.


ಚುಂಚನಗಿರಿಯಂತೆ ಪಂಚಕಲ್ಯಾಣಿಯಂತೆ

ಪಂಚಲಿಂಗಗಳಿವೆಯಂತೆ ಅಲ್ಲಿಗೆ

ಹೋದರೆ ಪಾಪ ಪರಿಹಾರ


ಪಂಚಲಿಂಗಗಳಾದ ಗಂಗಾಧರೇಶ್ವರ, ಗವಿಸಿದ್ಧೇಶ್ವರ, ಕತ್ತಲ ಸೋಮೇಶ್ವರ, ಈಶ್ವರ, ಚಂದ್ರಮೌಳೇಶ್ವರ ಇಲ್ಲಿ ನೆಲೆಗೊಂಡಿದ್ದಾರೆ. ನೆಲೆಗೊಂಡ ಒಂದೊಂದು ಸ್ಥಳವನ್ನು ನೋಡಲು ಗಿರಿಯ ಒಂದೊಂದು ದಿಕ್ಕಿಗೆ ಹೋಗಬೇಕು. ಭಕ್ತರ ನಿಚ್ಚಳ ಭಕ್ತಿ ಸಮರ್ಪಣೆಗೆ ಇಲ್ಲಿ ಕೊರತೆಯಿಲ್ಲ. ಪುಣ್ಯಕ್ಷೇತ್ರದ ದರ್ಶನದಿಂದ ಅವರ ಕೃಪೆಯಿಂದ ಜೀವನದಲ್ಲಿ ಶಾಂತಿಯನ್ನು ಸುಖವನ್ನು ನೆಮ್ಮದಿಯನ್ನು ಪಡೆಯುವ ಹಂಬಲ ಭಕ್ತರದು.


ಆದಿ ಚುಂಚನಗಿರಿಯ ಭೈರವ-ಮಾಳವ್ವ ಪ್ರಸಂಗವೂ ಬಹಳ ರಮ್ಯವಾಗಿದೆ. ಮಡದಿ ಪಾರ್ವತಿ ಇದ್ದು ಕುರುಬರ ಮಾಳವ್ವನನ್ನು ಭೈರವ ತರುವ ಸಾಹಸಕ್ಕೆ ತೊಡಗುವುದು ಅವಳ ಅನುಪಮ ರೂಪಿಗೆ ಮನಸೋತು-


ತುಪ್ಪದರವಿಗೆ ಸೋತ ತೆಕ್ಕೆ ತುರುಬಿಗೆ ಸೋತ

ತುಪ್ಪ ಮಾರುವ ಕುರುಬತಿ ಕೊರಳಲ್ಲಿ

ಮುತ್ತ ಕಂಡು ಭೈರವ ಮನಸೋತ


ಮಾಳವ್ವನ ಚಿತ್ರವನ್ನು ಜನಪದ ಕವಿ ಕಣ್ಣಿಗೆ ಕಟ್ಟುವಂತೆ ಮನೋಜ್ಞನವಾಗಿ ಇಲ್ಲಿ ಚಿತ್ರಿಸಿದ್ದಾನೆ. ಇಂಥ ಚೆಲುವೆಯನ್ನು ಭೈರವ ಗಿರಿಗೆ ತಂದು, ಅವಳೊಡನೆ ಸರಸವಾಡುವ ಅವಳಂತೆ ಕುರಿಕಾಯುವ, ಅವಳೊಂದಿಗೆ ಹುಲ್ಲೆಮರಿಯಾಗುವ ಅಪೂರ್ವ ಸನ್ನಿವೇಶಗಳನ್ನು ಶುಚಿಯಾದ ರಸಿಕತೆಯಿಂದ ಅಭಿವ್ಯಕ್ತಿಗೊಳಿಸಿದ್ದಾರೆ.


ಆದಿಚುಂಚನಗಿರಿಯ ಅಧಿದೈವ ಭೈರವ. ಭೈರವನ ಆರಾಧಕರು ಅಪಾರ. ಆದಿಚುಂಚನಗಿರಿಯ ಭೈರವನ ಬಗ್ಗೆ ಅಪಾರವಾದ ಸ್ಥಳಗತೆಗಳು. ಜನಪದ ಗೀತೆಗಳು ದೊರೆಯುತ್ತವೆ. ಪುರಾಣಗಳಲ್ಲಿ, ಶಾಸನಗಳಲ್ಲಿ ಶ್ರೀ ಕ್ಷೇತ್ರದ ಬಗ್ಗೆ ಉಲ್ಲೇಖಗಳಿವೆ ಅಪಾರ ಭಕ್ತರನ್ನು ಹೊಂದಿರುವ ಭೈರವ ಕ್ಷೇತ್ರ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಪುರಾಣ ಪ್ರಸಿದ್ಧವಾದ ಪ್ರಕೃತಿ ಸೌಂದರ್ಯದಿಂದ ಕೂಡಿದ ಕ್ಷೇತ್ರ ಸಂದರ್ಶಿಸುವುದಕ್ಕೂ ಅಭ್ಯಸಿಸುವುದಕ್ಕೂ ಯೋಗ್ಯವಾಗಿದೆ.

ಎದ್ದು ನೆನದೇವು ಸಿದ್ಧರ ಶಿವಯೋಗಿಯ
ರುದ್ರಾಕ್ಷಿ ವಿಭೂತಿ ಧರಿಸೋನ ಭೈರುವನ
ನೆನಯುತ ಕಲ್ಲ ಹಿಡಿದೇವು

ನಾಗಮಂಗಲದಾಚೆ ಬೆಳ್ಳೂರ ಬಯಲಾಚೆ
ಆಚೆ ಜೀರಳ್ಳಿ ಕೆರೆಯಂತೆಭೈರುವನ
ದೊರೆತನ ಚುಂಚನಗಿರಿಯಲ್ಲಿ